ಮಾನಸಿಕ ಸ್ವಾಸ್ಥ್ಯಕ್ಕಾಗಿ ವಿಚಾರ ನಿಯಮ
ಮಾನಸಿಕ ಸಂತುಷ್ಟಿಯ ರಹಸ್ಯ:
ಅನಾರೂಗ್ಯದ ಕಾರಣವು ನಮ್ಮ ಮಸ್ತಿಷ್ಕದಲ್ಲಿರುತ್ತದೆ, ಅಂತೆಯೇ ಎಲ್ಲಕ್ಕಿಂತ ಮೊದಲು ನಮ್ಮ ಮಸ್ತಿಷ್ಕದ ಮೇಲೆ ನಾವು ವಿಜಯ ಸಾಧಿಸಬೇಕು ಮತ್ತು ನಕಾರಾತ್ಮಕ ವಾದ-ವಿವಾದಗಳಲ್ಲಿ ಸಿಲುಕದೇ ಉಪಚಾರ ವಿಚಾರ ನಿಯಮದ ನೆರವನ್ನು ಪಡೆದುಕೊಳ್ಳಬೇಕು.
ವಿಚಾರ ನಿಯಮವು ಒಂದು ರಚನಾತ್ಮಕ ಸಿದ್ಧಾಂತವಾಗಿದೆ, ಇದು ಏನು ಹೇಳುತ್ತದೆ ಎಂದರೆ-ಪ್ರಜ್ಞೆ, ಉತ್ಸಾಹ ಮತ್ತು ವಿಶ್ವಾಸದೊಂದಿಗೆ ಪುನರುಚ್ಚರಿಸಲ್ಪಟ್ಟ ಪ್ರತಿಯೊಂದು ವಿಚಾರವು ವಾಸ್ತವಿಕ ರೂಪವನ್ನು ಪಡೆಯುತ್ತದೆ. ಯಾವಾಗ ನಾವು ಅನಂತ ಬಲಶಾಲಿ ಶಕ್ತಿ ಅಂದರೆ ಈಶ್ವರೀಯ ವಿಚಾರಗಳನ್ನು ನಮ್ಮ ಮನಸ್ಸಿನ ಮೂಲಕ ಹರಿಯಗೊಡುತ್ತೇವೆಯೋ ಆಗ ಈ ವಿಚಾರ ನಿಯಮವು ನಮಗೋಸ್ಕರ ಕಾರ್ಯ ಮಾಡಲು ಪ್ರಾರಂಭಿಸುತ್ತದೆ. ನಮಗೋಸ್ಕರ ಆ ಈಶ್ವರನು ನಿರ್ಮಿಸಿರುವುದೆಲ್ಲವೂ ನಮ್ಮ ಜೀವನದಲ್ಲಿ ಆಗಮಿಸಲಾರಂಭಿಸುತ್ತದೆ. ಅಂದರೆ ಸಂಪೂರ್ಣ ಸಾಸ್ಥ್ಯ, ಯೋಗ್ಯವಾದ ವ್ಯವಸಾಯ, ಸರಿಯಾದ ಉದ್ದೇಶ, ಪ್ರೇಮ, ಕಲೆ, ಸದ್ಗುಣಗಳು, ಸಫಲತೆ, ಜ್ಞಾನ, ವಿಕಾಸ ಹೀಗೆ ಎಲ್ಲವೂ ನಿಮ್ಮದಾಗುತ್ತವೆ. ಇದರಿಂದ ಮನುಷ್ಯ ನಿಜವಾದ ಆನಂದದ ಸ್ಥಿತಿಯನ್ನು ಪಡೆದುಕೊಳ್ಳುತ್ತಾನೆ. ಆನಂದಿತನಾದ ಮನುಷ್ಯನಿಂದಲೇ ಇತರರ ಒಳಿತು ಸಾಧ್ಯ.
ಹಾಗಾದರೆ ಬನ್ನಿ, ಈ ಪುಸ್ತಕದಲ್ಲಿ ನೀಡಲಾದಂಥ ವಿಚಾರ ಸೂತ್ರ, ಸ್ವಸಂವಾದ, ಮಹಾಅನುವಾದ ಮತ್ತು ಪಕ್ಷವಾಕ್ಯಗಳ ಮೂಲಕ ಇವತ್ತಿನಿಂದಲೇ ನಿಮ್ಮ ಮಸ್ತಿಷ್ಕವನ್ನು ಶಾಂತಿಪೂರ್ಣ ಅನುಭವಗಳಿಂದ, ಆಶಾವಾದಿ ಶಬ್ದಗಳಿಂದ ಹಾಗೂ ಸಕಾರಾತ್ಮಕ ವಿಚಾರಗಳಿಂದ ತುಂಬಿರಿ, ಆಗ ನಿಮ್ಮ ಬಳಿ ಒಂದು ಸುಂದರವಾದ, ವಿಶಾಲವಾದ ಆಶ್ಚರ್ಯಜನಕ ವಿಚಾರಗಳ ಭಂಡಾರ ಸಿದ್ಧಗೊಳ್ಳುವುದು. ಇದು ನಿಮ್ಮನ್ನು ಎಲ್ಲ ಕಾಯಿಲೆಗಳಿಂದ ಮುಕ್ತಗೊಳಿಸಬಲ್ಲದು.