ನಿತ್ಯ ಆಫೀಸಿಗೆ ಹೋಗುವ ಮಹಿಳೆಯರ ಉಡುಪುಗಳ ಬಗೆಗಿನ ಈ ಡ್ರೆಸ್ಅಪ್ ಗೇಮ್ಅನ್ನು ಒಮ್ಮೆ ಆಡಿ ನೋಡಿ. ಅಕೌಂಟಿಂಗ್ ಹಾಗೂ ಫಿನಾನ್ಸ್ ಆಫೀಸುಗಳಲ್ಲಿ ಉಡುಪುಗಳು ಸ್ವಲ್ಪ ಸಾಂಪ್ರದಾಯಿಕ ಎನಿಸುತ್ತದೆ. ಆದರೆ ಐಟಿ ಹಾಗೂ ಗೇಮ್ಸ್ ಇಂಡಸ್ಟ್ರಿಗಳಲ್ಲಿ ನಿಯಮಗಳು (“ಬಿಸಿನೆಸ್ ಕ್ಯಾಷುಯಲ್”) ಸ್ವಲ್ಪ ಸಡಿಲ ಇರುತ್ತದೆ. ಆಧುನಿಕ ಜಗತ್ತಿನಲ್ಲಿ ಬಿಸಿನೆಸ್ ಸ್ಟೈಲ್ ಎನ್ನುವುದು ನವರೀತಿಯ ಸಶಕ್ತ ಮಹಿಳೆಯನ್ನು ಬಿಂಬಿಸುತ್ತದೆ. ಬಿಸಿನೆಸ್ ಸ್ಟೈಲ್ ಎಂದಾಕ್ಷಣ ಸೌಂದರ್ಯಪ್ರಜ್ಞೆ/ಅಲಂಕಾರ ಇರಬಾರದು ಎಂದೇನೂ ಇಲ್ಲ!
ನಿಮಗೆ ಡ್ರೆಸ್ಅಪ್ ಹಾಗೂ ಮೇಕ್ಓವರ್ ಗೇಮ್.ಗಳೆಂದರೆ ಇಷ್ಟ ಎಂದಾದಲ್ಲಿ, ಆಫೀಸಿನಲ್ಲಿ ಕೆಲಸ ಮಾಡುವ ಮಹಿಳೆಯರ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿ ನೋಡಿ. ನಿಮಗಿದು ಒಳ್ಳೆಯ ತರಬೇತಿ ಆಗಲಿದೆ. ಈ ಮಹಿಳೆಯರು ಸುಂದರಿಯರು, ಯಶಸ್ವಿಯಾದವರು, ದೊಡ್ಡ ಕಂಪನಿಯೊಂದರಲ್ಲಿ ಕೆರಿಯರ್ ಬೆಳೆಸಿಕೊಳ್ಳುತ್ತಿರುವ ಈ ಮಹಿಳೆಯರು ಅತ್ಯಂತ ಬ್ಯುಸಿ ಸ್ಕೆಡ್ಯೂಲ್ ಹೊಂದಿರುತ್ತಾರೆ. ಆದರೆ, ತಮ್ಮ ಉಡುಗೆ-ತೊಡುಗೆ ಬಗ್ಗೆ ಸ್ವಲ್ಪವೂ ತಾತ್ಸಾರ ಮಾಡುವವರಲ್ಲ. ಆಂತರ್ಯದಲ್ಲಿ ನಿಜವಾದ ಫ್ಯಾಷನಿಸ್ತಾಗಳಾಗಿರುತ್ತಾರೆ.
ಬಿಸಿನೆಸ್ ಸ್ಟೈಲ್.ನಲ್ಲಿ ಸ್ಕರ್ಟ್, ಟ್ರೌಸರ್, ಷರ್ಟ್, ಜ್ಯಾಕೆಟ್, ಉಡುಪು, ಶೂ ಹಾಗೂ ಇನ್ನಿತರ ಐಟಂಗಳು ಇರುತ್ತವೆ. ಈ ವರ್ಚುಯಲ್ ಗೊಂಬೆಗಳಿಗಾಗಿ ನೀಡಿರುವ ಹೇರ್.ಸ್ಟೈಲ್.ಗಳು, ಫ್ಯಾನ್ಸಿ ಹ್ಯಾಂಡ್.ಬ್ಯಾಗ್.ಗಳು, ಆಭರಣಗಳು ಹಾಗೂ ಟ್ರೆಂಡಿ ಪರಿಕರಗಳನ್ನು ಚೆನ್ನಾಗಿ ಬಳಸಿಕೊಳ್ಳಿ. ಈ ಗೇಮ್.ನಲ್ಲಿ ಇರುವ ಎಲ್ಲ ಐಟಂಗಳು ಸಂಪೂರ್ಣ ಉಚಿತ, ಯಾವುದೂ ಲಾಕ್ ಆಗಿಲ್ಲ!
ಕಂಪನಿಯ ಡ್ರೆಸ್.ಕೋಡ್.ಗೆ ಅನುಗುಣವಾಗಿ ಮಹಿಳೆಯರ ಉಡುಪುಗಳನ್ನು ಡಿಸೈನ್ ಮಾಡಿ! ಒಂದು ಉತ್ತಮ ಮೇಕ್ಓವರ್ ಒಬ್ಬ ಪ್ರೊಫೆಷನಲ್ ಮಹಿಳೆ ತನ್ನ ಸಹೋದ್ಯೋಗಿಗಳ ನಡುವೆ ಎದ್ದು ಕಾಣುವಂತೆ ಮಾಡುತ್ತದೆ, ಅವಳಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ, ಜೊತೆಗೆ ಅವಳಿಗೆ ಹೊಸಹುರುಪನ್ನು ನೀಡುತ್ತದೆ.
ಉಚಿತ ಡ್ರೆಸ್ಅಪ್ ಗೇಮ್.ಗಳೆಂದರೆ ನಮಗೆ ಬಹಳ ಇಷ್ಟ, ಆದ್ದರಿಂದಲೇ ಹುಡುಗಿಯರಿಗಾಗಿ ಲೆಕ್ಕವಿಲ್ಲದಷ್ಟು ಡ್ರೆಸಅಪ್/ಮೇಕ್ಓವರ್ ಗೇಮ್.ಗಳನ್ನು ಯುವ ಫ್ಯಾಷನಿಸ್ತಾಗಳಿಗಾಗಿ ಸಿದ್ಧಪಡಿಸಿದ್ದೇವೆ.
ಅಪ್‌ಡೇಟ್ ದಿನಾಂಕ
ಅಕ್ಟೋ 31, 2024